ನನ್ನ ಪಾಲಿಗೆ ಇದು ಮೊದಲ ಸಲ ನನ್ನ ಬಗ್ಗೆ ಬರೆಯುವುದು ಎಂಬ ವಿಷಯ.. ನಾನು ಏನನ್ನೂ ಸ್ವಯಂ ಕಲ್ಪಿಸಿಕೊಂಡು ಕೆಲಸ ಮಾಡಿಲ್ಲ , ಆದರೆ ನಾನು ಇದುವರೆಗೆ ಗೀಚಿದ ಸಾಲುಗಳು ಮಾತ್ರ ಕಲ್ಪನೆಗಳು ಮಾತ್ರ.. ಒಮ್ಮೊಮ್ಮೆ ಕಲ್ಪನೆ ನಿಜವಾಗಬಾರದೇಕೆ ಎಂಬ ಆಸೆಯೂ ಹುಟ್ಟುತ್ತದೆ.. ಇಂತಹದೆ ನೂರಾರು ಸಾಲುಗಳು ಹೊಳೆದಾಗೆಲ್ಲ ಸರಿಯಾಗಿ ದಾಖಲಿಸಿಕೊಳ್ಳಲಾಗಲಿಲ್ಲ .. ಎಂದಾದರೂ ಕಲ್ಪನೆಗಳು ವಾಸ್ತವವಾದರೆ ಎಂಬ ಆಸೆಯು ಈ ಬ್ಲಾಗ್ ರಚನೆಗೆ ಪ್ರೇರಣೆ …

ನನ್ನ ಗೀಚುವ ಹವ್ಯಾಸವನ್ನು ಬೆಳೆಸಿದವರಿಗೆ ಈ ಬ್ಲಾಗ್ …..

        ಅಂದ ಹಾಗೆ ವೃತ್ತಿಯಲ್ಲಿ ನಾನು ಬೆಂಗಳೂರಿನಲ್ಲಿ  “ಮುಥೂಟ್ ಫಿನ್ ಕಾರ್ಪ್ ಲಿಮಿಟೆಡ್ ” ಎನ್ನುವ ಖಾಸಗಿ ಸಂಸ್ಥೆಗಾಗಿ ಸೇವೆ ಸಲ್ಲಿಸುತ್ತಿದ್ದೇನೆ.  ನನ್ನ ಹುಟ್ಟೂರು ಕೇರಳದ ಕಾಸರಗೋಡು ಎಂಬ ತಾಲೂಕಿನ ಕೋಳ್ಯೂರು ಎಂಬ ಗ್ರಾಮ. ಇಷ್ಟು ಧಾರಾಳ ಎಂದು ಭಾವಿಸಿ ವಿರಮಿಸುತ್ತೇನೆ …
 

  ಈಶ್ವರ “ಕಿರಣ” ಭಟ್
“ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ ” -ಅಡಿಗ

Advertisements