ಕತ್ತಲನ್ನೇ ಸುಟ್ಟ ಬೆಳಕು
ಅವಳ ಪ್ರೀತಿಗೆ , ನನ್ನ ಬದುಕಿಗೆ ! ಸೋಮವಾರ, ಮಾರ್ಚ್ 15 2010
ನನ್ನ ಕವನಗಳು 9:30 ಫೂರ್ವಾಹ್ನ
ಕತ್ತಲನ್ನೇ ಸುಟ್ಟ ಬೆಳಕು
ಒಂದು ಸತ್ಯ ಶನಿವಾರ, ಮಾರ್ಚ್ 13 2010
ನನ್ನ ಕವನಗಳು 12:12 ಅಪರಾಹ್ನ
ಒಂದು ಸತ್ಯ
ನಾನು ಮತ್ತು ಗಿಳಿ !! ಸೋಮವಾರ, ಮಾರ್ಚ್ 8 2010
ನನ್ನ ಕವನಗಳು 9:28 ಫೂರ್ವಾಹ್ನ
೧
ಭಗ್ನ ಪ್ರೇಮಿಗೆ !! ಶನಿವಾರ, ಮಾರ್ಚ್ 6 2010
ನನ್ನ ಕವನಗಳು 8:19 ಫೂರ್ವಾಹ್ನ
ನನ್ನ ಹಾಡು .. ಬುಧವಾರ, ಫೆಬ್ರ 24 2010
ನನ್ನ ಕವನಗಳು 5:13 ಫೂರ್ವಾಹ್ನ
ಒಂದು ನೀರವ ಸಂಜೆ….. ಶನಿವಾರ, ಫೆಬ್ರ 13 2010
ನನ್ನ ಕವನಗಳು 11:22 ಫೂರ್ವಾಹ್ನ
ಆ ಬಾನಿನೂರಿಂದ ಚಂದಿರನು ಬಂದಿಹನು!! ಶುಕ್ರವಾರ, ಜನ 29 2010
ನನ್ನ ಕವನಗಳು 9:41 ಅಪರಾಹ್ನ
ಕತ್ತಲ ಹಾಡುಗಳು !!! ಬುಧವಾರ, ಜನ 27 2010
ನನ್ನ ಕವನಗಳು 8:04 ಫೂರ್ವಾಹ್ನ
ನಿಮ್ಮ ಪಾಡಿಗೆ ನೀವಿದ್ದರೂ..
ಈ ಕತ್ತಲು ನಿಮ್ಮನ್ನ ಕಾಡುತ್ತದೆ ..
ನಿಘೂಢ ಆಕಾಶದ ಕಪ್ಪಿನ ಬೆಳಕನ್ನು
ಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗ
ಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !!
ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆ
ಆದರೆ ಇಲ್ಲೊಬ್ಬ ಹೊಳೆಯಿತ್ತಿದ್ದಾನೆ.
ಇಂದು ಹಚ್ಚಿದ ಬಣ್ಣ ತೊಳೆಯದೇ
ನಾಳೆಗೆ ಕಾಯ್ದಿರಿಸಿದ್ದಾನೆ
“ನಿನ್ನನ್ನು ನಾನು ಚೆನ್ನಾಗಿ ಬಲ್ಲೆ ” ಎಂದಾತನಿಗೆ
ಒಬ್ಬ ಕೇಳಿದನಂತೆ …” ನಿನ್ನೆ ರಾತ್ರಿ ನಾನೇನು ಕನಸು ಕಂಡೆ ” ?
ಈ ಕತ್ತಲೆನ್ನುವುದು ಒಂದು ಬಿಂದು .
ಸಹಜವಾಗಿದ್ದಷ್ಟೂ ನಾವು ಬಿಂದು ಚಿಕ್ಕದಾಗಿರುತ್ತದೆ..
ಈ ಕತ್ತಲೆನ್ನುವುದು ಎಷ್ಟು ದೀರ್ಘವಿದೆ ಗೊತ್ತೇ ?
ಇಂದೊಂದು ಕಳೆಯಲಿ ಹೇಳುವೆನು ಮತ್ತೆ !!
ISHWARA BHAT K
ನೀ ಹೋದೆ ಮರೆಯಾದೆ ನನ್ನ ಮರೆತು.. ಶನಿವಾರ, ಜನ 16 2010
ನನ್ನ ಕವನಗಳು 8:01 ಫೂರ್ವಾಹ್ನ
ಚೆಲುವು ಬಂದು ಕರೆಯಿತೆನ್ನ ಶನಿವಾರ, ಜನ 16 2010
ನನ್ನ ಕವನಗಳು 7:36 ಫೂರ್ವಾಹ್ನ
ಚೆಲುವು ಬಂದು ಕರೆಯಿತೆನ್ನ
ಒಲುಮೆ ಮಾತಿಗೆಳೆಸಿತೆನ್ನ
ಹಾಡು ಹೂವು ಹನಿಗಳೆಲ್ಲ
ಇಲ್ಲಿ ಒಲವ ಚಿತ್ರವೇ
ಎದೆಯ ಭಾವ ಮಾತ್ರವೇ
ಅಲ್ಲಿ ಇಲ್ಲಿ ಚಪ್ಪರದಲಿ
ತಬ್ಬಿ ಬೆಳೆದ ಮಲ್ಲೆ ಬಳ್ಳಿ
ಹಿಡಿಯ ತುಂಬಾ ಬಿಳಿಯ ಹೂವ
ನೀನು ತಂದ ದಿನವನು
ಹೇಗೆ ನಾನು ಮರೆವೆನು?
ತಂಗಾಳಿಗೆ ಮೋಡವುದುರಿ
ಸೊಗದ ಸೋನೆ ಹನಿಗಳುದುರಿ
ಸಗ್ಗ ಭುವಿಗೆ ತಂದ ಸೊಗಸ
ಹೇಗೆ ನಾನು ಪಡೆಯಲಿ
ನೀನು ಇರದ ದಿನದಲಿ ?
ಎಲ್ಲೋ ಕೇಳಿ ಮರೆತು ಹೋದ
ಹಾಡ ಮತ್ತೆ ಎದೆಗೆ ತಂದ
ನಿನ್ನ ಒಲವ ರಾಗಕೀಗ
ನನ್ನ ಕವಿತೆ ನೀಡುವೆ
ಎಂದೂ ನಲಿವ ಬಯಸುವೆ
ISHWARA BHAT K